ಪ್ರಭಾತ್ ಕಲಾವಿದರು ಅಟ್ಲಾಂಟದಲ್ಲಿ - ನೆಡೆದು ಬಂದ ದಾರಿ...(e-ವಂದನಾರ್ಪಣೆ)


ಮಾನ್ಯ ಮಿತ್ರರೇ,

ನಿಮಗೆಲ್ಲ ತಿಳಿದ ಹಾಗೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ನಮ್ಮ ನೃಪತುಂಗ ಕನ್ನಡ ಕೂಟ ಆಯೋಜಿತ ಪ್ರಭಾತ್ ತಂಡದ ನ್ರತ್ಯ ನಾಟಕ ರೂಪಕ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿದೆ! ಇದು ನಿಮಗೆಲ್ಲರಿಗೂ ಹಾಗು ನನಗೂ ಕೂಡ ಅತ್ಯಂತ ಖುಷಿ ಕೊಡುವ ಕ್ಷಣ!

ಈ ಸಂತಸದ ಕ್ಷಣಗಳನ್ನು ಹೀಗೆಯೇ ಎಂದಿನಂತೆ ನಮ್ಮ ಕನ್ನಡ ಕೂಟದಲ್ಲಿ ಮುಂದುವೆರೆಸೋಣವೆಂಬ ಆಶಾಕಿರಣದೊಂದಿಗೆ ನನ್ನ ಮನದಾಳದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ನೀವುಗಳು ಈ ಕಾರ್ಯಕ್ರಮಕ್ಕೆ ಬಂದಿದ್ದೀರಾ ಮತ್ತು ಕಾರ್ಯಕ್ರಮದ ಬಗ್ಗೆ ಬಹು ಮೆಚ್ಚಿನ ಮಾತುಗಳನ್ನು ನನಗೆ ಮತ್ತು ನನ್ನ ಪತ್ನಿ ರೇಖಾಳಿಗೆ ತಿಳಿಸಿದ್ದೀರಾ. ಇದಕ್ಕೆ ರೇಖಾ ಮತ್ತು ನಾನು ಅತ್ಯಂತ ನಮ್ರತೆಯಿಂದ ನಿಮ್ಮ ಮೆಚ್ಚುಗೆಯನ್ನು ಸ್ವೀಕರಿಸಿ ಕಾರ್ಯಕ್ರಮದ ಆರಂಭ ಮತ್ತು ರೂಪುರೇಖೆಗಳು ಹೇಗೆ ನೆಡಯಿತು ಎಂಬುದರ ಬಗ್ಗೆ ತಿಳಿಸಬೇಕೆಂದು ನನ್ನ ಬಯಕೆ.

ನಾನು ಅಂದಿನ ದಿನವೇ ವಂದನಾರ್ಪಣೆಯ ಪಟ್ಟಿ ಸಿದ್ಧಪಡಿಸಿ ಅದರ ಮೂಲಕ ನನ್ನ ಹಿಂದೆ ಮತ್ತು ನನ್ನ ಎಡಬಲಗಳಲ್ಲಿ ಶ್ರಮಿಸಿ ಕಾಲಕಾಲಕ್ಕೆ ಹಲವಾರು ಮಹತ್ವಪೂರ್ಣ ಸಲಹೆಗಳನ್ನು ಕೂಟ್ಟಂತಹ ಅನೇಕರನ್ನು ಹೆಸರಿಸಿ, ಅವರೆಲ್ಲರನ್ನು ವೇದಿಕೆಯ ಮೇಲೆ ಕರೆತಂದು ನಿಮ್ಮಗಳ ಮೆಚ್ಚುಗೆ ಅವರೆಲ್ಲರಿಗೂ ಅರ್ಪಣೆಯಾಗಲಿ ಎಂಬ ಆಶಯವಿತ್ತು. ಆದರೆ, ಸಮಯ ಅಭಾವದಿಂದ ಇದು ಸಾಧ್ಯವಾಗಲಿಲ್ಲ ಮತ್ತು ನನಗೆ ಇದು ಎಂದೆಂದೂ ಅಳಿಸಲಾಗದಂತಹ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಅದರ ಜೊತೆಗೆ ನಾನು ಮುಂದೆ ಹೆಚ್ಚು ಕಾರ್ಯಕ್ರಮಗಳ ಸಮಯ ವ್ಯತ್ಯಯ ಬಗ್ಗೆ ಗಮನಹರಿಸಬೇಕೆಂಬ ಒಂದು ಪಾಠವಾಗಿ ಮಾರ್ಪಟ್ಟಿದೆ.

ಇನ್ನು, ಕಾರ್ಯಕ್ರಮದ ಹೇಗೆ ಅಯೋಜಿಸಲ್ಪಟ್ಟಿತು ಮತ್ತು ಹೇಗೆ ಇದರ ರೂಪುರೇಖೆಗಳೇಗಾಯಿತು ಎಂಬುದರ ಅರಿವು ಮಾಡಿಸುತ್ತೇನೆ.

ಸರಿ ಸುಮಾರು ವರ್ಷದ ಆರಂಭದಲ್ಲಿ, ಶ್ರೀಯುತ ರಾಮಸ್ವಾಮಿಯವರು ಪ್ರಭಾತ್ ತಂಡದ ಇ-ಮೇಲ್, ಪ್ರಭಾತ್ ಅಮೆರಿಕಾಗೆ ಅಕ್ಕದ ಅಡಿಯಲ್ಲಿ ಪ್ರವಾಸ ಬರುತ್ತಿರುವುದು ಮತ್ತು ಅವರುಗಳು ಇನ್ನಿತರ ಕನ್ನಡ ಸಂಘಗಳ ನಗರಗಳಲ್ಲಿ ಕಾರ್ಯಕ್ರಮ ಕೊಡುವುದರ ಬಗ್ಗೆ ನನಗೆ ಇ-ಮೇಲ್ ತಲುಪಿಸಿದ್ದರು ಮತ್ತು ನಮ್ಮ (executive committee (EC )) ಕಾರ್ಯಕಾರಿ ಸಮಿತಿಯು ಪ್ರಭಾತ್ ತಂಡವನ್ನು ನಮ್ಮಲ್ಲಿ ಕರೆಹಿಸಿಕೊಳ್ಳುವ ಸಾಧಕ ಬಾಧಕವನ್ನು ಕೇಳಬಯಸಿದ್ದರು. ನನಗೆ ಮತ್ತು EC ಗೆ ನಮ್ಮಲ್ಲಿಗೆ ಪ್ರಭಾತ್ ರನ್ನು ಕರೆಸಿಕೊಳ್ಳುವ ಬಯಕೆ ಆದರೆ ಅದರ ವೆಚ್ಚದ ಬಗ್ಗೆ ಬಂದಾಗ ಅಬ್ಬಾಬ್ಬ ಅದು ಆಗದ ಮಾತು. ಈ ಚಿಂತನೆಯೇ ನಮ್ಮ BOD (Board ಆಫ್ Directors ) ಹಾಗೂ EC ಸದಸ್ಯರು ಒಂದು ಕಡೆ ಸೇರಿ ಒಂದು ಮಹತ್ವಪೂರ್ಣ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅದು ಏನೆಂದರೆ, ಇಷ್ಟು ಭಾರಿ ಪ್ರಮಾಣದ (ಖರ್ಚಿನಲ್ಲಿ) ಮಹತ್ವದ ಕಾರ್ಯಕ್ರಮ ಕೂಟದ ಸದಸ್ಯತ್ವದ ಹಣದಲ್ಲಿ ಮಾಡದೇ ಈ ಕಾರ್ಯಕ್ರಮಕ್ಕೆ ಬದಲಾಗಿ ಟಿಕೆಟ್ ನ ಮೂಲಕ ಹಣ ಸಂಗ್ರಹಣೆ ಮಾಡಬೇಕೆನ್ನುವ ಹಾಗೂ ಹಣವಲ್ಲದೆ ಮತ್ತಿತರ ಕಾರ್ಯನಿರ್ವಹಣೆಯ ಬಗ್ಗೆ ನಿರ್ಣಯವಾಯಿತು. ಅದರ ಪ್ರಕಾರ ನಮ್ಮ EC ಒಂದು ಇ- ಕರೆಯೋಲೆಯನ್ನು (evite) ನಮ್ಮ ಎಲ್ಲಾ ಕನ್ನಡಿಗರಿಗೆ ಪ್ರಭಾತ್ ಕಾರ್ಯಕ್ರಮದ ಬಗ್ಗೆ ವಿವರ ಮತ್ತು ಖರ್ಚು-ವೆಚ್ಚದ ಬಗ್ಗೆ ಮಾಹಿತಿಯನ್ನು ನೀಡಿ, ಈ ಕಾರ್ಯಕ್ರಮಕ್ಕೆ ಟಿಕೆಟ್ ನ ಮೂಲಕ ಪ್ರವೇಶದ ಬಗ್ಗೆ ಅರಿವು ಮೂಡಿಸಿ ನಮ್ಮೆಲ್ಲಾ ಕನ್ನಡಿಗರ ಅಭಿಪ್ರಾಯವನ್ನು ಕೇಳಲಾಯಿತು.

ನಮ್ಮ ಮೊಟ್ಟಮೊದಲ ಇ-ಕರೆಯೋಲೆ ನ್ನು ನೀವೆಲ್ಲ ಓದಿದ್ದೀರೀ ಮತ್ತು ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿದಿರಿ, ಇದಕ್ಕೆ ನಾವುಗಳು ಭಾರಿ ಅಭಾರಿ. ನಿಮ್ಮಗಳ ಅಭಿಪ್ರಾಯ ಹೆಚ್ಚು ಪ್ರಭಾತ್ ಅವರನ್ನು ಕರೆಸುವುದೇ ಆಗಿದ್ದಿದ್ದಕ್ಕೆ ನಾವುಗಳು ಹುರಿಪಿನಿಂದ ಕಾರ್ಯಯೋಜನೆಯನ್ನು ಸಿದ್ದಪಡಿಸಿಕೊಳ್ಳಹೊರಟೆವು. ಆದರೆ, ನಮ್ಮೆಲ್ಲರ ಮನಸ್ಸಿನಲ್ಲಿ ಬಹಳ ಆತಂಕ ಮನೆ ಮಾಡಿತ್ತು ಏಕೆಂದರೆ ಈ ರೀತಿಯಲ್ಲಿ ನೃಪತುಂಗ ಕನ್ನಡ ಕೂಟದ ಕಾರ್ಯಕ್ರಮದ ಯೋಜನೆ ನೂತನವಾದದ್ದು. ಕೂಟದ ಹಿತೈಷಿಗಳಾದ ಸದಸ್ಯರುಗಳು ಇ ಹೊಸ ಯೋಜನೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ದೊಡ್ಡ ಚಿಂತೆ ನಮ್ಮೆಲ್ಲರಲ್ಲಿ ಮನೆ ಮಾಡಿತ್ತು. ಇದರ ಜೊತೆಗೆ ಬೇರೆ ಬೇರೆ ವ್ಯವಸ್ಥಾಪನೆ ಕೂಡ ಒಂದು ಸವಾಲಾಗಿತ್ತು. ಈ ಚಿಂತೆ ಹೇಗಿರುತ್ತದೆ ಎಂದರೇ ನಮ್ಮಲ್ಲಿ (EC) ಎಲ್ಲರಲ್ಲೂ ಬಹಳಷ್ಟು ಆತಂಕ ಆದರೆ ಯಾರು ಕೊಡ ಬಹಿರಂಗವಾಗಿ ಹೇಳಲು ಇಚ್ಚಿಸುತ್ತಿರಲಿಲ್ಲ. ಎಲ್ಲಾ ಅಯೋಜಕರಲ್ಲೂ ಇದೇ ರೀತಿಯ ತುಮುಲವಿರುತ್ತದೆ. ಈಗ ನೋಡಿ, ಒಂದು ತಂಡವು ಕಾರ್ಯಕ್ರಮದ ವ್ಯವಸ್ಥೆಯಲ್ಲಿರುವಾಗ ಯಾರಾದರು ಆ ಕಾರ್ಯಕ್ರಮದ ಬಗ್ಗೆ ಸುಖಾಸುಮ್ಮನೆ ಬಾಧಕಗಳನ್ನೇ ಹೇಳಿದರೆ ತಂಡ ಒಡೆದು ಹೋಳಾಗುವುದರಲ್ಲಿ ಸಂಶಯವಿಲ್ಲ ಅಥವಾ ಅ ಸಮಾರಂಭ/ಕಾರ್ಯಕ್ರಮ ಹಲಸಿಕೊಂಡುಬಿಡುತ್ತದೆ. ಅದ್ದರಿಂದ ನಮ್ಮಲ್ಲಿಯೂ ಒಂದು ರೀತಿಯ ಆತಂಕ ಬೀಡುಬಿಟ್ಟಿದ್ದು ಯಾರಲ್ಲಿಯೂ ಹೇಳಲಾರದೆ ತೊಳಲಾಡುತ್ತಿದ್ದೆವು. ಹೀಗೆ ಸಾಗಿ, ಕಾರ್ಯಕ್ರಮಕ್ಕಾಗಿ ಸಿದ್ದತೆ ಮಾಡುತ್ತಿದ್ದೆವು. ಮೊದಲನೆಯದಾಗಿ ಪ್ರಭಾತ್ ತಂಡ 12 ಮಂದಿ ಇದ್ದ ದೊಡ್ಡ ತಂಡ, ಈ ತಂಡಕ್ಕೆ ನಮ್ಮ ಎಂದಿನ ಬಾಲಾಜಿ ದೇವಸ್ಥಾನದ ಒಳಾಂಗಣ ಸಾಲುತ್ತಿರಲ್ಲಿಲ್ಲ ಆದ್ದರಿಂದ ನಾವುಗಳು ಬೇರೆಯ ಥಿಯೇಟರೆನ್ನು ಹುಡಕಬೇಕಿತ್ತು, ಇನ್ನು ಬೇರೆ ಥಿಯೇಟರೆಗೆ ಬಾಡಿಗೆಯೇ ಬಹಳವಾಗುತ್ತದೆ ಅದರೊಡನೆಯೇ ನಾವು ಈ ಕಾರ್ಯಕ್ರಮಕ್ಕೆ ಪ್ರವೇಶ ದರವಿಟ್ಟಿದ್ದರಿಂದ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ನಡೆಸಬೇಕಾಗಿತ್ತು.

ನಾನು ಮತ್ತು ರೇಖಾಳಂತೂ ಎಲ್ಲಿ ಯಾರನ್ನಾದರು ಭೇಟಿ ಮಾಡಿದರೆ ಸಾಕು ಪ್ರಭಾತ್, ಪ್ರಭಾತ್ ಎಂದು ಕಾರ್ಯಕ್ರಮದ ಬಗ್ಗೆ ಶುರುವಿಟ್ಟುಕೊಳ್ಳುತ್ತಿದ್ದೆವು. ನಮಗೆ ಅನ್ನಿಸತೊಡಗಿತು ಇದು ಹೀಗೆ ಮುಂದುವರಿದರೆ ನಾವೆಲ್ಲರೂ (EC) ಇದೇ ಟ್ರಾನ್ಸ್ ನಲ್ಲಿರುತ್ತೇವೆ ಎಂದು ಆದರೆ ನಮ್ಮೆಲ್ಲರಿಗೂ ಪ್ರಭಾತ್ ಅವರ ಅಟ್ಲಾಂಟ ಕಾರ್ಯಕ್ರಮ ಪ್ರಚಾರ ಬಹು ಮುಖ್ಯವಾಗಿತ್ತು. ಇದೇ ಸಮಯದಲ್ಲಿ ಅಕ್ಕ ಕೂಡ ಕೆಲವೊಂದು ಕಟ್ಟಪ್ಪಣೆಗಳನ್ನು ಹೊರಡಿಸಿ ಅದರ ಪ್ರಕಾರ ಪ್ರಭಾತ್ ತಂಡ ಅಟ್ಲಾಂಟ ಪ್ರವಾಸ ಅನುಮಾನವಾಗಿತ್ತು. ನಾನು ಇಲ್ಲಿ ಅಕ್ಕ ಸಂಸ್ಥೆಯನ್ನು ದೂಷಿಸ ಹೊರಟಿಲ್ಲ. ಅಕ್ಕ ಅದರ ಕಾರ್ಯಸೂಚಿಯನ್ನು ನೆರೆವೆರಿಸುವನುಗಾಣವಾಗಿ ಕೆಲವೊಂದು ಕಟ್ಟಲೆಗಳನ್ನು ವಿಧಿಸಿದರೆ ಅದನ್ನು ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಅದು ನಮ್ಮ ಪ್ರಯತ್ನಕ್ಕೆ ತೊಡಕಾಗಿದ್ದದ್ದು ಸಹಜ.ಇದರಿಂದ ನಾವುಗಳು ಕಾರ್ಯಕ್ರಮದ ಪೂರ್ಣ ರೂಪದ ನಿರ್ಧಾರಕ್ಕೆ ಬರುವುದು ಬಹು ತಡವಾಗಿತ್ತು ಇದಕ್ಕೆ ಜೊತೆಯಲ್ಲಿ ಪ್ರಭಾತ್ ತಂಡ ಕೂಡ ತಾವುಗಳು ಕೇವಲ 25 ದಿನಗಳ ಅಮೆರಿಕ ಪ್ರವಾಸದಲ್ಲಿರುತ್ತೇವೆಂಬ ವಿಷಯ ತಿಳಿಸಿದರು. ಇದಂತೂ ನಮ್ಮ ಉತ್ಸಾಹಕ್ಕೆ ತಣ್ಣೀರು ಎರೆಚಿದಂತಾಯಿತು. ನಮ್ಮ ನಿರ್ಧಾರ ದಿನ ದಿನಕ್ಕೆ ಡೋಲಾಯಮಾನವಾಗುತ್ತಾ ಸಾಗಿತ್ತು. ನೋಡಿ! ನಮಗಿದ್ದದ್ದು ಎರಡೂವರೆ ವಾರಗಳ ಸಮಯಾವಕಾಶ ಅದರಲ್ಲಿ ನಾವುಗಳು ಒಂದು ಶುಭ ದಿನವನ್ನು ನಿಗಧಿ ಮಾಡಿ ಅದಕ್ಕೆ ತಕ್ಕಂತೆ ಥಿಯೇಟರೆ ಹುಡುಕಬೇಕಾಗಿತ್ತು, ಆ ದಿನಕ್ಕೆ ಪ್ರಭಾತ್ ತಂಡ ನಮ್ಮಲ್ಲಿಗೆ ಬರಲು ವಿಮುಕ್ತರಾಗಿರಬೇಕಿತ್ತು! ಅದೆಲ್ಲಕ್ಕಿಂತ ಹೆಚ್ಚಾಗಿ ನಮ್ಮೆಲ್ಲಾ ಕನ್ನಡ ಮಿತ್ರರಿಗೆ ಕಾರ್ಯಕ್ರಮದ ಬಗ್ಗೆ ವಿವರವನ್ನು ನೀಡಬೇಕಾಗಿತ್ತು - ಯಾವತ್ತು, ಎಲ್ಲಿ, ಎಷ್ಟು ಹೊತ್ತಿಗೆ ಎಂದು. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮೆಲ್ಲಾ ಕನ್ನಡಿಗರಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿದು ಅವರೆಲ್ಲರೂ ಟಿಕೆಟ್ ಕೊಂಡು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕಿತ್ತು. ಈಗ ಹೇಳಿ ನಮ್ಮ ನಿದ್ದೆ ಎಷ್ಟು ಹಾಳಾಗಿರಬೇಕೆಂದು, ನಮ್ಮ ಎದೆ ಬಡಿತ ಎಷ್ಟು ಹೆಚ್ಚಾಗಿದ್ದಿರಬೇಕೆಂದು ಆಗಲೇ ನಮ್ಮ EC ಜೊತೆಗೆ ನಾವು ಇದ್ದೇವೆ ಎಂದು ಬಂದ ಮಿತ್ರಸಾಗರ!

ಬಹು ಮುಖ್ಯವಾಗಿ ನಮ್ಮ ಪೂಜನೀಯ ರಾಮಸ್ವಾಮಿ ಕೊಟ್ಟ ಹಲವರು ಮಾರ್ಗದರ್ಶನ ಅಂದು ನಾವುಗಳೆಲ್ಲ ನೋಡಿದ ಆರ್ಜುನನಿಗೆ ಶ್ರೀ ಕೃಷ್ಣನ ಭಗವತ್ದರ್ಶನದಂತೆ ಕೆಲಸ ಮಾಡಿತು!.

ಡಾ|| ಜಯಂತಿ, ಭಾಸ್ಕರ್ ಮತ್ತು ಬಾಲಾಜಿ ಕಿತಿಗಾನಹಳ್ಳಿ ರವರ ಸಲಹೆಗಳು ಸಂಜೀವಿನಿಯಾಯಿತು.

ಇದೇ ವೇಳೆಗೆ ರಾಜೀವ್ ಮದ್ದೂರ್ ಮತ್ತು ವಿಜಯ್ ಶ್ರೀನಿವಾಸ್ ಇಬ್ಬರು ಕೂಡಿ ನಮ್ಮ EC ನ ಕಾರ್ಯದರ್ಶಿ ವಾಸುದೇವ್ ಭಟ್ ಜೊತೆಯಲ್ಲಿ ತಯಾರಿಸಿದ ಕಾರ್ಯಕ್ರಮದ ಪ್ರಚಾರ ಮತ್ತು ವ್ಯವಹಾರ ಕಾರ್ಯತಂತ್ರವಂತೂ ನಮ್ಮ ಕಾರ್ಯಕ್ರಮದ ಯಶಸ್ಸಿಗೆ ಬಹು ಮುಖ್ಯ ತಂತ್ರವಾಗಿತ್ತು! ಈ ಟೀಂ ನ ಕಾರ್ಯ ವೈಖರಿಯೇ ಆಗಿತ್ತು ಇದರಲ್ಲಿದ್ದ ಮೂರೂ ಜನ ಯಾವುದೇ ಕೆಲಸಕ್ಕೆ ಯಾರೊಬ್ಬರ ಅಪ್ಪಣೆಯೂ ಬೇಡದಂತೆ (ನನ್ನ direction ಗೆ ಕಾಯದೆ) ತಾವಾಗಿಯೇ ಹೊಸ ಹೊಸ ಕಾರ್ಯತಂತ್ರವನ್ನು ಹುಡುಕುತ್ತಾ ಬೆಳಿಗ್ಗೆ ರಾತ್ರಿ ಎನ್ನದೇ ಒಂದೇ ಸಮನಾಗಿ ಎಲ್ಲ ಕೆಲಸಗಳಲ್ಲಿಯೂ ಭಾಗಿಯಾದರು - ಪೋಸ್ಟರ್ ಹಚ್ಚುವುದು, ಪ್ರಚಾರಕ್ಕಾಗಿ ಬಿಸಿನೆಸ್ಗಳನ್ನು ಹುಡುಕುವುದು, ಮುಂಗಡವಾಗಿ ಟಿಕೆಟ್ ಗಳನ್ನು ಮಾರುವುದು, ಆ ದಿನ ಪಕೋಡ ತರುವುದೇ ಯಾಗಲಿ ಅದನ್ನು ಬಾಕ್ಸ್ ಹಾಕುವುದೇ ಆಗಲಿ ಅಥವಾ ಥಿಯೇಟರೆನ ಒಳಗೆ ನಿಯತ್ರಣ ಒಂದೋ ಎರಡೋ ಇವರಿಗೆ ನಾನು ಎಷ್ಟು ವಂದನೆ, ಧನ್ಯವಾದಗಳನ್ನು ಹೇಳಿದರೂ ಸಾಕಾಗಲಾರದು ಆದರೆ ನನಗೆ ಇಂತಹವರೊಂದಿಗೆ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾದೆನಲ್ಲ ಇದೇ ನನ್ನ ಅದೃಷ್ಟ!. ಇವರುಗಳ ಉತ್ಸಾಹವೆಷ್ಟಿತ್ತೆಂದರೇ.. ಇವರುಗಳು ತಮ್ಮ ತಮ್ಮ ವಾಹನವನ್ನು ಚಾಲನೆ ಮಾಡಿ ಫಿಲಿಡೆಲ್ಫಿಯಾ ಸಿಟಿಯವರೆಗೂ ಹೋಗಿ ಪ್ರಭಾತ್ ತಂಡವನ್ನು ಕರೆದು ತಂದು ಆ ಮೂಲಕ ಅವರ ಪ್ರಯಾಣ ವೆಚ್ಚವನ್ನು ಕಡಿಮೆಗೊಳಿಸುವ ಪ್ರಯತ್ನವೂ ಇತ್ತು!

ಮುಂಗಡ ಟಿಕೆಟ್ ಮಾರಟವಂತೂ ನಮಗೆ ಬಹು ಕಠಿಣ ಪರೀಕ್ಷೆಯೇ ಆಗಿತ್ತು ಸರಿ! ನಾವೆಲ್ಲಾ ಇಂದಿನ ದಿನಗಳಲ್ಲಿ online payment ಗೆ ಎಷ್ಟು ಒಗ್ಗಿದ್ದೆವೇಂದರೆ ನಮಗೆ ಮುಂಗಡ ಟಿಕೆಟ್ ಮಾರಾಟ online payment ಸಹಾಯವಿಲ್ಲದೆ ಮಾಡುವುದೇಗೆ ಎಂಬ ಚಿಂತೆಯಂತೂ ರಾಕ್ಷಸನಂತೆ ನಮ್ಮ ಮುಂದಿತ್ತು. ಆಗ ಸಹಾಯಕ್ಕೆ ಅವರಾಗಿಯೇ ಬಂದ ಸವಿತಾ ಕುತ್ಯರ್,ನಾಗು ತೋಟದ, ಸುಷ್ಮಾ ರಾವ್, ಸೀಮಾ ಮುರಳಿ, ಮಂಗಳ ಉಡುಪ, ವಾಣಿಶ್ರೀ ಯವರು ಅವರಲ್ಲದೆ ಅವರ ಸಂಸಾರವನ್ನೇ ಟಿಕೆಟ್ ಮಾರಾಟಕ್ಕೆ ತೊಡಗಿಸಿದರು. ಇದರಿಂದ ಮುಂಗಡ ಟಿಕೆಟ್ ಮಾರಾಟವಂತೂ ಎಷ್ಟು ಮುತುವರ್ಜಿಯಿಂದ ಸಾಗಿತೆಂದರೆ, ಟಿಕೆಟನ್ನು ಯಾರಾದರೂ ಕೊಳ್ಳುವುದಕ್ಕೆ ಕೇಳಿದಾಗ ಅವರಿಲ್ಲಿಗೆ ಆಯಾ ಪ್ರಾಂತದ ಸಹಾಯಕರು ಕೊಳ್ಳುವವರಿದ್ದಲ್ಲಿಗೇ ಹೋಗಿ ಅವರಿಂದ ಚೆಕ್ ಅಥವಾ ಕ್ಯಾಶ್ ತೆಗೆದುಕೊಂಡು ಅವರಿಗೆ ಟಿಕೆಟ್ ನೀಡಿ ಬಂದು, ಕೊಂಡವರ ಹೆಸರು ಮತ್ತಿತರ ವಿವರವನ್ನು ದಾಖಲಾಯಿಸುತ್ತಿದ್ದರು. ಈಗ ನೋಡಿ ಹೇಗೆ ನಮ್ಮ ಚಿಂತೆಗಳೆಲ್ಲ ಒಂದೊಂದಾಗಿ ಹೇಗೆ ಕರಗತೊಡಗಿತು.

ಇಲ್ಲಿಗೆ ಮುಗಿಯಲಿಲ್ಲ, ಆ ದಿನದ ಕಾರ್ಯಕ್ರಮದ ಪೂರ ನಿರ್ವಹಣೆಯಂತೂ ಬಹಳವಿತ್ತು ಇದಕ್ಕೆ ಸಹಾಯಕ್ಕೆ ಬಂದಂತ ಕನ್ನಡ ಸ್ನೇಹಿತರ ಸಾಗರವೇ ಇಲ್ಲಿದೆ ನೋಡಿ..
  •  ಪ್ರಭಾತ್ ತಂಡದ ಹನ್ನೆರಡೂ ಜನರ ಸಂಚಾರ ವ್ಯವಸ್ಥೆಗಾಗಿ ಅವರಾಗೇ ಕೇಳಿ ಸಹಾಯ ಮಾಡಿದವರಾದ.. ಅನಂತ್ ಜಹಗಿರ್ದಾರ್, ಶ್ರೀಕಾಂತ್ ಬೆಳ್ಳೂರು, ಬಾಲಾಜಿ ಕಿತಿಗಾನಹಳ್ಳಿ, ಮುರಳಿ ಗೋಕರೆ, ರಾಮಚಂದ್ರ ರಾವ್ ಮತ್ತು ಮಧು ಬಾಲಕೃಷ್ಣ
  • ಪ್ರಭಾತ್ ತಂಡಕ್ಕೆ ಹಾಗು ನಮ್ಮೆಲ್ಲಾ volunteers ರ ಊಟೋಪಚಾರಕ್ಕೆ ಟೊಂಕ ಕಟ್ಟಿ ನಿಂತ ವನಿತೆಯರಾದ.. ನಾಗು ಇನಾಂದಾರ್, ವಾಣಿಶ್ರೀ ರಾವ್, ಅಪರ್ಣ ಬೆಳ್ಳೂರು, ಮಂಗಳಾ ಉಡುಪ
  • ಥಿಯೇಟರ್ ನ ಒಳ ಹೊರಗೆ ಬಂದ ಅತಿಥಿಗಳ ನಿರ್ವಹಣೆಗೆ ಬಂದ ಮಹನೀಯರಾದ: ಮನು ರಾವ್, ರಾಜೀವ್ ಮದ್ದೂರ್, ವಿಜಯ ಶ್ರೀನಿವಾಸ, ಅನಂತ್ ಜಹಗಿರ್ದಾರ್, ವಾಸುದೇವ್ ಭಟ್, ಅನು ಭಟ್, ವಂದನ ಕುಲಕರ್ಣಿ
  • ಇನ್ನು ನಮ್ಮ ಯುವ ಕನ್ನಡ ಸ್ನೇಹಿತರೂ ಕೊಡಿ ಸಹಾಯಕ್ಕೆ ಬಂದ ಕನ್ನಡ ಕಣ್ಮಣಿಗಳು: ಅಶ್ಮಿತ ತೋಟದ, ಅರ್ಜುನ್ ಮುರಳಿಧರ್, ಸಹೃದ್ ಧರಣೇಂದ್ರ, ನಿಶಾ ಕಶ್ಯಪ್, ಸಹನಾ ಕುತ್ಯಾರ್, ಸಂಜನಾ ಕುತ್ಯಾರ್, ದೀಪಕ್ ರಾವ್, ಪ್ರಿಯಾಂಕ ಗೋಕರೆ, ಅರುಣಾ ಶ್ರೀನಿವಾಸಯ್ಯ ಮತ್ತು ಆಶಿತಾ ರಾಜೇಅರಸ್ 
  • ವೇದಿಕೆ ನಿರ್ವಹಣೆ , ವೇದಿಕೆಯ ದೀಪ, ಧ್ವನಿವರ್ಧಕ ಮತ್ತು ಶಬ್ದ ವ್ಯವಸ್ತೆ ಗೆ ಒಂದಿಂಚು ಬಾಧಕ ಬಾರದಂತೆ ಬಹಳಷ್ಟು ಮುತುವರ್ಜಿ ವಹಿಸಿದ ಮಹನೀಯರಾದ: ಮಹೇಶ್ ಕೊಮ್ಮಜೋಸುಲ, ಮಧು ಬಾಲಕೃಷ್ಣ ಮತ್ತು ಸತೀಶ್ ಶಿವರುದ್ರಪ್ಪ
  • ಕಾರ್ಯಕ್ರಮದ ಪ್ರಕಟಣೆ ಮತ್ತು ದೇವರ ವಂದನೆಗೆ ಕೇವಲ 5 -10 ನಿಮಿಷಗಳ ಮುನ್ನ ಕೊಟ್ಟ ಕೋರಿಕೆಯನ್ನು ನಗು ನಗುತ್ತಾ ಮನ್ನಿಸಿ ಮಾಡಿಕೊಟ್ಟ ಮಾನಿನಿಯರಾದ: ಚೈತ್ರ ಗೋಪಿನಾಥ್ ಮತ್ತು ಮಂಗಳಾ ಉಡುಪ
  • ಕಾರ್ಯಕ್ರಮದ ಛಾಯಾಚಿತ್ರ ಹೊಣೆಗಾರಿಕೆ ಹೊತ್ತ ಮಹನಿಯ.. ಮುರಳಿ ಗೋಕರೆ
ನಮ್ಮಲ್ಲಿ ಒಂದು ಮಾತಿದೆ - ಗೊಮ್ಮಟೇಶನ ತಲೆಯ ಮೇಲೆ ಹಾಲು ಹಾಕಿದವರಿಗಿಂತ ಅವನ ಕಾಲು ತೊಳೆಯುವವರೇ ಹೆಚ್ಚು ಜನರಿಗೆ ಕಾಣುವುದು ಅಂತ ಹಾಗೆಯೇ ನಾನು ವೇಧಿಕೆಯ ಮೇಲಿದ್ದೆ ಎಂಬ ಒಂದೇ ವಿಷಯಕ್ಕೆ ಈ ಕಾರ್ಯಕ್ರಮ ನನ್ನಿಂದಲೇ ಸಾಧ್ಯವಾಯಿತು ಎಂದರ್ಥವಲ್ಲ. ಈ ಯಶಸ್ಸಿನ ಹಿಂದೆ ಬಹಳಷ್ಟು ಸದಸ್ಯರ ಪರಿಶ್ರಮಪ್ರೇರಣೆ ಇತ್ತು ಎಂಬುದನ್ನು ನಾನು ಇಲ್ಲಿ ಮನದಟ್ಟು ಮಾಡಲು ಪ್ರಯತ್ನಿಸುತ್ತೇನೆ. 
ಈಗ ಹೇಳಿ,ಇದರೆಲ್ಲದರ ಜೊತೆಗೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದವಿರುವಾಗ ಮತ್ತು ಇಷ್ಟೆಲ್ಲಾ ಸಹೃದಯ ಸ್ನೇಹಿತರಿರುವಾಗ ಯಾವ ಕಾರ್ಯಕ್ರಮ ತಾನೇ ಯಶಸ್ವಿಗೊಳ್ಳುವುದಿಲ್ಲ? ಇದು ನಮ್ಮ ಕನ್ನಡದ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಬಹು ಯಶಸ್ವಿಯಾಗಿ ನೇರೆವೆರಿಸುವುದಕ್ಕೆ ಮುನ್ಸೂಚನೆಗಳೆಂದರೆ ತಪ್ಪಾಗುವುದಿಲ್ಲ!

ಇವರೆಲ್ಲೆರ ಜೊತೆಯಲ್ಲಿ ಕಾಲ ಕಾಲಕ್ಕೆ ಸಂಧರ್ಭೋಚಿತ ಸಲಹೆಗಳನ್ನು ಕೊಟ್ಟಂತ ಅಸಂಖ್ಯಾತ ಸ್ನೇಹಿತರಿಗೆ ನನ್ನ ಮತ್ತು ರೇಖಾಳ ಅನಂತಾಂತ ವಂದನೆಗಳು, ನಾವುಗಳು ನಿಮ್ಮೊಂದಿಗಿರುವುದೇ ಭಾಗ್ಯ ಇದರೊಂದಿಗೆ ನಾನು ನಮ್ಮ ಶಿವಮೊಗ್ಗದ ಕನ್ನಡ ಶಾಯರಿ ಕವಿ ಅಸಾದುಲ್ಲ ಬೇಗ್ ರ ಈ ಶಾಯರಿಯೊಂದಿಗೆ ನಿಮ್ಮೆಲ್ಲರಿಗೂ ನಮಿಸುತ್ತೇನೆ

ಹಾರುವ ಹಕ್ಕಿಗೆ ಏಣಿ ಏಕೆ ?
    ಈಜುವ ಆಮೆಗೆ ದೋಣಿ ಏಕೆ?
       ಪ್ರೇಮದ ಭಾಷೆಗೆ ಲೇಖನಿ ಏಕೆ ?

ಹಾರುವ ಹಕ್ಕಿಗೆ ಏಣಿ ಏಕೆ?
   ಈಜುವ ಆಮೆಗೆ ದೋಣಿ ಏಕೆ?
      ಪ್ರೇಮದ ಭಾಷೆಗೆ ಲೇಖನಿ ಏಕೆ ?

ಕಣ್ಗಳಲಿ ಕನಸು ..
   ತೋಳಿನಲ್ಲಿ ಬಲ ..
     ರೆಕ್ಕೆಗಳಷ್ಟೇ ಸಾಲದು ...

ಕಣ್ಗಳಲಿ ಕನಸು ..
   ತೋಳಿನಲ್ಲಿ ಬಲ ..
      ರೆಕ್ಕೆಗಳಷ್ಟೇ ಸಾಲದು ...

ನೆಲ ಬಿಟ್ಟು ಹಾರಲು
ಛಲ ಬೇಕು ಮಿತ್ರರೇ ....
ಆಕಾಶಕ್ಕೆರಲು


ಛಲ ಬೇಕು ಮಿತ್ರರೇ ...
ನೆಲ ಬಿಟ್ಟು ..ಆಕಾಶಕ್ಕೆರಲು

ಅಂತಹ ಛಲ ಹುಟ್ಟುವುದು ..
ಇಂತಹ ಗೆಳೆಯರಿಂದ , ಹೃದಯವಂತ ತಂಡದಿಂದ
ಸಿರಿಗನ್ನಡoಗೆಲ್ಗೆ !

ಇಂತಿ ನಿಮ್ಮವ
ಪ್ರದೀಪ