ಈ ಮುನ್ನ ನಡೆದ ಕಾರ್ಯಕ್ರಮಗಳ ಬಗ್ಗೆ - ಭಾಗ 1 ..

ಮಿತ್ರರೇ,

ಕ್ಷಮಿಸಿ, ಬಹಳ ದಿನಗಳ ನಂತರ ಇ-ವಾರ್ತೆ ನಿಮ್ಮನ್ನು ಸೇರಿದೆ.
ಕಳೆದ ವರ್ಷದಲ್ಲಿ(2010) ನಮ್ಮ ಕನ್ನಡ ಕೂಟದಲ್ಲಿ  ನಡೆದ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಒಂದು ವಾರ್ಷಿಕ ವರದಿಯ ರೂಪದಲ್ಲಿದೆ ಕೆಳಗಿನ ಛಾಯಾಚಿತ್ರಗಳು.




ಏಪ್ರಿಲ್ 25  ರ - ಕನ್ನಡ ಕಲಿಕೆಯ graduation - 52 ಕನ್ನಡ ಮಕ್ಕಳಿಗೆ ಪದವಿ ಪತ್ರವನ್ನು ಹಂಚಲಾಯಿತು


ನೋಡಿ! ನಮ್ಮ ಮುಂದಿನ ಕನ್ನಡ ಕಲಿಗಳು! ಇವರೆಲ್ಲಾ ಕನ್ನಡ ಕಲಿಕೆಯನ್ನು ನಿಲ್ಲಿಸದೆ ಮುಂದುವರೆಯಲಿ


ಅಲ್ಫರೆಟ್ಟ ಕನ್ನಡ ಕಲಿ ಶಾಲೆಯ ಮಕ್ಕಳು 




ಲಾರೆನ್ಸೆವಿಲ್ ಕನ್ನಡ ಶಾಲೆಯ ಮಕ್ಕಳು
 ಮೇರಿಯಟ್ಟ  ಕನ್ನಡ ಶಾಲೆಯ ಮಕ್ಕಳು



ಪ್ರಜ್ಞಾಳ ಕನ್ನಡ
 ಕಲಿಕೆಯ ಪ್ರದರ್ಶನ




ಮೇರಿಯಟ್ಟ ಕನ್ನಡ 
ಶಾಲೆಯ ಮಕ್ಕಳ 
ಕನ್ನಡ ಕಲಿಕೆಯ 
ಪ್ರದರ್ಶ








ಮೇ 15  ರಂದು -  ಪ್ರೊ. ಲಕ್ಷ್ಮಿ ಚಂದ್ರಶೇಖರ್ರ ಕ್ರಿಯೇಟಿವ್ ಥಿಯೇಟರ್ ತಂಡದಿಂದ ಎರಡು ಹಾಸ್ಯ ನಾಟಕಗಳು - 
ರತ್ನನ ಪರ್ಪಂಚ ಹಾಗು ಹೀಗಾದ್ರೆ ಹೇಗೆ - ನಾಟಕಗಳ ಚಿತ್ರಗಳು 

 ಅಬ್ಬಬ್ಬಾ! ಅಂದು ಬಂದಿದ್ದ 4 ಜನ ಮಹಾನ್ ಕಲಾವಿದರು ಕೂಟ್ಟಂತ ಎರಡು ನಾಟಕಗಳು ಎಷ್ಟು ಹಾಸ್ಯಭರಿತವಾಗಿತ್ತು!


ಅವರ ಚಾಕಚಕ್ಯತೆ, ನೈಜ ಅಭಿನಯ ಅದಕ್ಕೆ ಪೂರಕವಾದ ಚುರುಕು ಸಂಭಾಷಣೆ, ವೇದಿಕೆ ಸಜ್ಜತೆ ಹಾಗು ಶೀಘ್ರವಾದ ಅಲಂಕರಣೆ ಮತ್ತು ವೇಷಭೂಷಣಗಳು ಎಲ್ಲರನ್ನೂ ಸಂಮೋಹನಗೊಳಿಸಿತ್ತು.

ನಾವೆಲ್ಲರೂ ಅವರುಗಳು ಸುಮಾರು 6 ರಿಂದ 7 ಮಂದಿ ಇರಬೇಕು ಎಂದು ತಿಳಿದಿದ್ದೆವು. ಆದರೆ ಅವರುಗಳು ನಾಲಕ್ಕೇ ಮಂದಿ ಎಂದು ತಿಳಿದು ಇನ್ನೂ ಆಶ್ಚರ್ಯಭರಿತರಾಗಿದ್ದೆವು!
ಹೀಗಾದ್ರೆ ಹೇಗೆ.. ನಾಟಕದ ಸನ್ನಿವೇಶ


ಹೀಗಾದ್ರೆ ಹೇಗೆ.. ನಾಟಕದ ಸನ್ನಿವೇಶ  

 


ಹೀಗಾದ್ರೆ ಹೇಗೆ.. ನಾಟಕದ ಸನ್ನಿವೇಶ


ಹೀಗಾದ್ರೆ ಹೇಗೆ.. ನಾಟಕದ ಸನ್ನಿವೇಶ

ಹೀಗಾದ್ರೆ ಹೇಗೆ.. ನಾಟಕದ ಸನ್ನಿವೇಶ


 





ಕನ್ನಡ ಕೂಟದ ಸದಸ್ಯರು ತದೇಕದಿಂದ  ನಾಟಕವನ್ನು ಸವಿಯುತ್ತಿರುವುದು














ಹೀಗಾದ್ರೆ ಹೇಗೆ.. ನಾಟಕದ ಸನ್ನಿವೇಶ














ಕ್ರಿಯೇಟಿವ್ ತಂಡದ ನಾಟಕ ಹಾಸ್ಯಮಯಗಿತ್ತೆಂದು ಇದರಿಂದ ತಿಳಿಯುತ್ತದೆ!














Standing Ovation!














ಇವರೇ ಅಂದಿನ ಮಧ್ಯಾಹ್ನವನ್ನು ಎಂದಿಗೂ ಮರೆಯಲಾರದಂತೆ ಮಾಡಿದ ಕಲಾವಿದರು!

ಬಲದಿಂದ - ರಾಮಕೃಷ್ಣ ಕನ್ನಾರ್ಪಡಿ, ಸುಂದರ್ ರಾಜ್,
ಪ್ರೊ|| ಲಕ್ಷ್ಮಿ ಚಂದ್ರಶೇಖರ್ ಮತ್ತು ಗಜಾನನ ನಾಯಕ್

ಇವರೆಲ್ಲರ ಕಾರ್ಯಕ್ರಮ ನೋಡಿದ ನಾವುಗಳೇ ಧನ್ಯರು!



















ಜುಲೈ 24 ರ - ಪ್ರಸಿದ್ದ ಹಿನ್ನೆಲೆ ಗಾಯಕ ಬದರಿ ಪ್ರಸಾದ್ ರ ಕನ್ನಡ ಹಾಡುಗಳ ರಸದೌತಣದ ಒಂದು ಸಂಜೆ
ಬದರಿ ಪ್ರಸಾದ್ ಒಬ್ಬ ಉನ್ನತ ಗಾಯಕ ಅವರ ಸುಶ್ರಾವ್ಯ ಹಾಡುಗಳನ್ನ ಕೇಳುತ್ತಾ ಕುಳಿತರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಆ ಸಂಜೆಯ ಕೆಲ ಚಿತ್ರಗಳು.



















ಸೆಪ್ಟೆಂಬರ್ 18 ರ - ವಿಭಾ ಚಾರಿಟಿ ಸಂಸ್ತೆಯೊಡನೆ ಕೂಟದ ಸದಸ್ಯರಿಂದ ನಡೆ 
ಸೆಪ್ಟೆಂಬರ್ 18 ರಂದು ಬೆಳ್ಳಂಬೆಳಗ್ಗೆ ನಮ್ಮ ಕನ್ನಡ ಕೂಟದ ಸದಸ್ಯರು ಸಣ್ಣ ಚಿಣ್ಣರಿಂದ ಮೊದಲ್ಗೊಂಡು ದೊಡ್ಡವರು, ವಯಸ್ಸಾದವರು ಜಾರ್ಜಿಯಾ ಟೆಕ್ ಪಾರ್ಕಿಂಗ್ ಲಾಟ್ ನಲ್ಲಿ ಸೇರಿದಾಗ ಮನಸ್ಸಿನಲ್ಲಿ ಏನೂ ಒಂದು ತರಹ ಕುತೂಹಲ,
ಸಂತೋಷ. 
ಅಂದಿನ ದಿನ ನಮ್ಮ ಕನ್ನಡ ಕೂಟದ ವತಿಯಿಂದ ನಮ್ಮ ಸದಸ್ಯರು $ 500.00 ಕ್ಕೊ ಹೆಚ್ಚು ಧನ ಸಂಗ್ರಹಣೆ ಮಾಡಿದ್ದರು! ಇದೆಲ್ಲ ಸಾಧ್ಯವಾಗಿದ್ದು ಮಹೇಶ್ ಕೊಮ್ಮಜೋಸುಲ ಅವರ ಅವಿರತ ಪ್ರಯತ್ನದಿಂದ. ಇವರಿಗೆ ನಮ್ಮ ವಂದನೆಗಳು.

ಒಬ್ಬೊಬ್ಬರಾಗಿ ಬೆಳಿಗ್ಗೆನೇ ಎದ್ದು ಬರುತ್ತಿರುವುದು..
















ನಾವು ನಿಮಗಿಂತ ಎರಡು ಸೆಕೆಂಡ್ ಮೊದಲು ಬಂದಿದ್ದು ಗೊತ್ತ?
















ಇರಲಿ..ನೀವುಗಳು ಯಾರು ಮೊದಲು ಅಂತ ವಾಕ್ ರೇಸ್ ನಲ್ಲಿ ತೋರಿಸಿ















ನೋಡಿ ನಮ್ಮ ಕಲಿಗಳು 5K ಓಡಕ್ಕೆ ರೆಡಿಯಾಗಿದ್ದಾರೆ..  
ರಮೇಶ್: ಏನು? ಕ್ಯಾಮರಾ ಹಿಡಿದು ನಿಂತಿರುತ್ತೀರೋ ಅಥವಾ  
ನನ್ನ ಜೊತೆ 5K ಓಡಕ್ಕೆ ಬರುತ್ತಿರೋ?




















ನಾವೇ ಏನ್.ಕೆ.ಕೆ ಯ ಯುವ ಪಡೆ, ನಾವು ಹೀಗೆ ಪ್ಲೇಸ್ ಮೈನ್ಟೈನ್ ಮಾಡ್ತೀವಿ















ನಮ್ಮನ್ನು ಪುಟಾಣಿಗಳೆಂದು ಲಘುವಾಗಿ ತಿಳಿಯಬೇಡಿ.
ನಾವ್ ಏನ್.ಕೆ.ಕೆ ಯ ಪುಟಾಣಿ ಪಡೆ!
















ಮಂಕ, ಮಡೆಯ ಮತ್ತು ಮುಠ್ಠಾಳ ನಾವಲ್ಲ ನಮ್ಮ ಫೋಟೋ ತೆಗೆದವರು..












ಈಗಲೇ ಫೋಟೋ ತೆಗೆಯಿರಿ..5K ವಾಕ್ ಮಾಡಿದ ಮೇಲೆ ನಾವು
ಈ ರೀತಿ ಆಕ್ಟಿವ್ ಆಗಿರಲ್ಲ..
ನಾವ್ ರೆಡಿ..ನಾವ್ ರೆಡಿ ವಾಕ್ ಮಾಡೋದಕ್ಕೆ ಆಲ್ ರೆಡಿ ..
ಏನ್ ರಘು ಇಷ್ಟೊಂದು ಸ್ಪೀಡೂ..ನಾನು ಬರ್ತೀನಿ ಸ್ವಲ್ಪ ತಡೀರಿ!


ಹ್ಹೆ ಹ್ಹೆ.. ನಾವುನೂ ಮುಗಿಸಿದ್ವಿ 5K ನ

ವಾಸು ಮತ್ತು ಅನು: ನೋಡಿ ನಾಮ್ಮಿಬ್ಬರ ಸಾಮರಸ್ಯ ಹೇಗಿದೆ ..ನಾವಿಬ್ಬರೂನೂ ಒಟ್ಟಿಗೆ ಮುಗಿಸುತ್ತಿದ್ದೇವೆ.

ಭಾರತಿ ಶಾಸ್ತ್ರೀ: ನಾನು ಇಲ್ಲಿದ್ದೀನಿ.. ಸ್ವಲ್ಪ ಕ್ಯಾಮರ ಈ ಕಡೆ ಕ್ಲಿಕ್ಕಿಸಿ.

ಲಕ್ಷ್ಮೀ ಮಸೂರ್: ನೀವು ಸ್ವಲ್ಪ ಸರಿಯಾಗಿ ಫೋಕಸ್ ಮಾಡಿದ್ದಿದ್ರೆ..
 ನಾನು, ಭಾರತಿ ಒಟ್ಟಗೆ ಒಂದೇ ಫೋಟೋದಲ್ಲಿ ಇರ್ತ್ತಿದ್ವಿ


ಗುರು ಮತ್ತು ಲಲಿತ: ನಮ್ಮನ್ನೂ ಫೋಕಸ್ ಮಾಡ್ತಾ ಇದ್ದಾರೆ ಅಂದುಕೋತೀನಿ..

ಯಾವ ಜಾಹಿರಾತಿಗೆ ಈ ಪೋಸ್, ಸರ್ಪ್ಹ್ ಗೂ ಅಥವಾ ಟೈಡ್ ಗೋ..?

ನೋಡಿ, ನಾವೇ ಏನ್.ಕೆ.ಕೆ ನ ಪ್ರತಿನಿಧಿಸಿದ್ದು ಹೇಗಿದೆ? ಖುಷಿಯಾಗಿದೆ ಮನಸ್ಸು..
 ಹಿತವಾಗಿದೆ ನೆರಳು..

ಸತೀಶ್ ಮತ್ತು ವೀಣಾ: ಈ ಪಾಪರರ್ಜ್ಹಿ ಗಳು  ಎಲ್ಲಿ ನೋಡಲಿ ಅಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ..
ಹೋಗಲಿ ಇವರಿಗೂ ಒಂದು ಪೋಸ್ ಕೊಟ್ಟು ಬಿಡೋ

ವಾಕ್ ಅಷ್ಟೇ ಅಲ್ಲ ..fun ಗೂ ಟೈಮೂ ಇತ್ತು!
ನೋಡಿ! ನಾನು ಇವರನ್ನೇ walk ನಲ್ಲಿ ಹಿಂದೆ ಹಾಕಿದ್ದು ..
ಆಮೇಲೆ ಇವರು ನನ್ನ ಹಿಂದೆ ಹಾಕಿದರು..





























ಸೂಚನೆ: ಈ ಎಲ್ಲಾ ಮೇಲೆ ಕಂಡ ಛಾಯಾಚಿತ್ರಗಳ ಅಡಿಬರಹಗಳು ಕೇವಲ ತಮಾಷೆಗಾಗಿ. ನಿಮಗೆ ಇದು ಇಷ್ಟವಾಗುತ್ತದೆ ಎಂದು ತಿಳಿಯುತ್ತೇವೆ. ಇಷ್ಟವಾಗದಿದ್ದಲ್ಲಿ ದಯವಿಟ್ಟು ಕ್ಷಮಿಸಿ.

ಸೆಪ್ಟೆಂಬರ್ 26 ರ - ಪ್ರಸಿದ್ದ ಪ್ರಭಾತ್ ತಂಡ ಅಟ್ಲಾಂಟದಲ್ಲಿ ..


ಈ ಕಾರ್ಯಕ್ರಮದ ಬಗ್ಗೆ ಏನು ಹೇಳೋದು? ಅದರ ಬಗ್ಗೆ ಬರೆಯುತ್ತಾ ಹೋದರೆ 100 ಪುಟಗಳಷ್ಟು ಬರೆದರೂ ಸಾಲದಾಗುತ್ತದೆ.
ಈ ಕಾರ್ಯಕ್ರಮವು ಒಂದು ಸಂಪೂರ್ಣ ಖುಷಿ ಕೊಟ್ಟ ಕಾರ್ಯಕ್ರಮ. ಇದು ನಮ್ಮ ಕನ್ನಡ ಕೂಟದ ಬಹಳಷ್ಟು ಸದಸ್ಯರ ಪರಿಶ್ರಮ ಹಾಗು ಅವರೆಲ್ಲರ ಧೃಡ ಮನೋಭಾವವೇ ಕಾರ್ಯಕ್ರಮದ ಯಶಸ್ಸಿಗೆ ಕಾರಣ. ಈ ಕಾರ್ಯಕ್ರಮ ನೆಡೆದು ಬಂದ ದಾರಿ ಮತ್ತು ಅದರ ಹಿಂದೆ ನಮ್ಮ ಸದಸ್ಯರ ಶ್ರಮದ ಬಗ್ಗೆ ಒಂದು ಸುದೀರ್ಘವಾದ ಅಂಕಣ ಇದೇ ಸಂಚಿಕೆಯಲ್ಲಿ ಪ್ರಕಟವಾಗಿದೆ. ತಾವೆಲ್ಲರೂ ದಯಮಾಡಿ ಓದಿ ನಮ್ಮ ಸದಸ್ಯರನ್ನು ಅಭಿನಂದಿಸಿ.

ಇವರಿಬ್ಬರೂ ಯಾರು ಗೊತ್ತಾಯಿತಾ, ಇಲ್ಲವ?.. ಕೊನೆಯಲ್ಲಿದೆ ಉತ್ತರ...


ಇಂದ್ರನ ದರ್ಬಾರ್.. ಮಹಿಷಾಸುರ ಮರ್ದನ ರೂಪಕ

ಭರತ, ಬಾಹುಬಲಿಯ  ಮಹಾಯುದ್ದ ರೂಪಕ







ಅರ್ಜುನ ಮತ್ತು ಕೃಷ್ಣ .. ಭಗವತ್ ದರ್ಶನ ರೂಪಕ

ವಿಶ್ವರೂಪ ದರ್ಶನ.. ಭಗವತ್ ದರ್ಶನ ರೂಪಕ

ಪ್ರಭಾತ್ ತಂಡಕ್ಕೆ ಡಾ|| ರಾಮಸ್ವಾಮಿ ಅವರಿಂದ ಅಭಿನಂದನೆಗಳು 

ಕಾರ್ಯಕ್ರಮ ಯಶಸ್ಸಿನ ಮುಕ್ತಾಯಕ್ಕೆ ಫ್ಯಾಮಿಲಿ ಫೋಟೋ!



ಇನ್ನೂ ಮರೆಯಲಿಲ್ಲ.. ಮೇಲಿನ ಪ್ರಶ್ನೆಗೆ ಉತ್ತರ.. ನಮ್ಮ ಏನ್.ಕೆ.ಕೆ ಕನ್ನಡ ಕೂಟದ ಸದಸ್ಯರಾದ ಬಾಲಾಜಿ ಮತ್ತು ಶ್ರೀಕಾಂತ್ ಅವರುಗಳ ಕಲಾ ಪ್ರತಿಭಾ ಪ್ರದರ್ಶನ ಪ್ರಸಿದ್ದ ಪ್ರಭಾತ್ ತಂಡದೊಂದಿಗೆ!

ಅಕ್ಟೋಬರ್ 2  ರ - ಪುರಂದರ ದಾಸರ ಆರಾಧನಾ ಮಹೋತ್ಸವ ಕನ್ನಡ ಕೂಟದಲ್ಲಿ..
ಪ್ರಭಾತ್ ಕಾರ್ಯಕ್ರಮದಂತೆಯೇ ದಾಸರ ಆರಾಧನೆಯೂ ಕಳೆದ ವರ್ಷದ ಒಂದು ಹೊಸ ಪ್ರಯತ್ನ ಕನ್ನಡ ಕೂಟದಲ್ಲಿ. ಈ ಕಾರ್ಯಕ್ರಮದ ರೂಪುರೇಖೆಗಳು, ಸಿದ್ದತೆಗಳು ಪ್ರಭಾತ್ ಕಾರ್ಯಕ್ರಮಕ್ಕಿಂತಲೂ ಮೊದಲು ಯೋಚಿಸಲಾಗಿತ್ತು.
ಈ ಕಾರ್ಯಕ್ರಮ ಮಂಗಳಾ ಉಡುಪ ಮತ್ತು ಹೇಮಾ ನಾಗೇಂದ್ರ ಅವರ ಕನ್ನಡ ಕೂಟದ ಬಗ್ಗೆಯ ಕಳಕಳಿ ಮತ್ತು ಕನ್ನಡ ಸಂಗೀತ ಅದರಲ್ಲೂ ದಾಸರ ಪದಗಳ ಬಗ್ಗೆಯ ವಿಶೇಷ ಪ್ರೀತಿಯ ಒಂದು ಕಾಣಿಕೆ ಹಾಗು ಇವರೀರ್ವರ ಪರಿಶ್ರಮ. ಇವರಿಬ್ಬರಿಗೆ ಮತ್ತು ಇವರ ಜೊತೆಯಲ್ಲಿ ಕೆಲಸ ಮಾಡಿದ ಎಲ್ಲರನ್ನೂ ನಾವು ಒಗ್ಗಟ್ಟಾಗಿ  ಅಭಿನಂದಿಸುವ.
ನೀವು ಅಂದಿನ ಕಾರ್ಯಕ್ರಮಕ್ಕೆ ಬಂದಿರಲ್ಲಿಲ್ಲವಾದಲ್ಲಿ, ನಮ್ಮ ಕೂಟದ ಹಲವಾರು ಸದಸ್ಯರ ಪ್ರತಿಭೆಯನ್ನು ಅಹ್ಲಾದಿಸುವಲ್ಲಿ ತಪ್ಪಿರುವಿರಿ. ಇರಲಿ ಮುಂದಿನ ಬಾರಿ ತಪ್ಪದೆ ಬನ್ನಿ ಅಲ್ಲಿಯವರೆಗೂ ಇದೋ ಇಲ್ಲಿದೆ ಅಂದಿನ ಛಾಯಾಚಿತ್ರಗಳ ಸಂಗ್ರಹಣೆ.



















ಮುಂದುವರೆಯುವುದು ....