ಶುಭಾಶಯಗಳು..

ಬನ್ನಿ ನಾವೆಲ್ಲ ಸೇರಿ ಈ ತಿಂಗಳಲ್ಲಿ ಹುಟ್ಟುಹಬ್ಬವಿರುವ ಕೆಳಕಂಡ ಮಕ್ಕಳ ಹುಟ್ಟುಹಬ್ಬವನ್ನಾಚರಿಸೋಣ..

ಮ್ರಿದಿನಿ ಸತೀಶ್ 


ಸತೀಶ್ ಮತ್ತು ರಂಜಿತ ರ ಮುದ್ದಿನ ಮಗು ತನ್ನ ಮೊದಲ ಹುಟ್ಟುಹಬ್ಬದ ನಿರೀಕ್ಷಣೆಯಲ್ಲಿದ್ದಾಳೆ 

ಇವಳಿಗೆ ಸಂಗೀತ ಕೇಳುವುದಕ್ಕೆ, ಡಾನ್ಸ್ ನೋಡಲಿಕ್ಕೆ ಮತ್ತು ಹೊರಗೆ ಸುತ್ತಾಡಲು ಬಲು ಇಷ್ಟ. 


ಇವಳ ನಗು ಸದಾ ಹೀಗೆಯೇ ಇದ್ದು ಖುಷಿಯಾಗಿರಲೆಂದು ಹರಸೋಣ.



ಅಮೂಲ್ಯ ಜಯಂತ್ 

ಇವಳು ಜಯಂತ್ ಮತ್ತು ಕುಮುದರ ಎರಡನೇ ಮುದ್ದಿನ ಮಗಳು.

ನಿಮಗೆ ಗೊತ್ತ? ಇವಳು ಎಷ್ಟು ಸುಶ್ರಾವ್ಯವಾಗಿ ಬಸವಣ್ಣನ ವಚನಗಳನ್ನು ಹಾಡುತ್ತಾಳೆಂತ ಮತ್ತು ಎಷ್ಟು ಸ್ಪಷ್ಟವಾಗಿ ಭಾರತ ರಾಷ್ಟ್ರ ಗೀತೆಯನ್ನು ಹಾಡುತ್ತಾಳೆ ಅಂತ?   ಅಕ್ಕನ ತರಹ ಉತ್ತಮ dancer ಕೂಡ!

ಇವಳಿಗೆ ಪಿಜ್ಜಾ ಬಹಳ ಇಷ್ಟವಾದ ತಿನಿಸು.


ನಿಶಾಂತ್ ಬಾಗಲೋಡಿ 

ಇವನು ವೆಂಕಟೇಶ್ ಮತ್ತು ನಳಿನ ರ ಮುದ್ದಿನ ಮಗ 

ಇವನಿಗೆ ಕರಾಟೆ, ಬಾಸ್ಕೆಟ್ ಬಾಲ್ ಮತ್ತು ಚೆಸ್ ಆಡಲಿಕ್ಕೆ ಇಷ್ಟ. ಇವನಿಗೆ ಹಲವಾರು ಕನ್ನಡ ಮಕ್ಕಳ ಪದ್ಯಗಳು ಹಾಡಲಿಕ್ಕೆ ಬರುತ್ತದೆ!

 ನಾನ್ , ಪನೀರ್ ಮತ್ತು ಹಯಗ್ರೀವ (ಮಡ್ಡಿ) ತಿನಿಸುಗಳಂತೂ ಬಲು ಪ್ರಾಣ!