ನಗೆ ಹನಿ ..ಜನವರಿ 2011

****
ಭರವಸೆಯ ಎತ್ತರ ಎಷ್ಟು ಅಂಥ ಗೊತ್ತಾ???
99 ವರ್ಷಗಳ ವಯೋವೃದ್ಧೆಯೊಬ್ಬರು ಏರ್ ಟೆಲ್ ನ ಹೊಸ ಲೈಫ್ ಟೈಂ ಯೋಜನೆಯ ಸಂಪರ್ಕ ಪಡೆಯುವುದು!

****
ಪ್ರಶ್ನೆ: ಹುಟ್ಟಾ ದರೋಡೆಕೋರನ ಮಗನೊಬ್ಬ ಪರೀಕ್ಷೆಯಲ್ಲಿ ಫೇಲಾದಾಗ ಕೊಟ್ಟ ಉತ್ತರ ಏನೂಂತ ಗೊತ್ತಾ?
ಉತ್ತರ: ಯಪ್ಪೋವ್ ಅವರು ನನ್ನನ್ನು 3 ಗಂಟೆಗಳ ಕಾಲ ನಾನಾ ವಿಧವಾಗಿ ಪ್ರಶ್ನಿಸಿದರು, ಆದರೆ ನಾನು ಒಂಚೂರು ಬಾಯ್ಬಿಟ್ಟಿಲ್ಲ.

****
''ಸೋಮಾರಿತನ ಎನ್ನುವುದು ನಮ್ಮ ಅತಿದೊಡ್ಡ ಶತ್ರು''ಜವಾಹರಲಾಲ್ ನೆಹರು.
''ಪ್ರೀತಿಸುವುದನ್ನು ಶತ್ರುಗಳಿಗೂ ಕಲಿಸಿಕೊಡಬೇಕು '' ಮಹಾತ್ಮಾಗಾಂಧಿ.
ಈಗ ಹೇಳಿ ಯಾರನ್ನು ಅನುಸರಿಸಬೇಕೆಂದು!

****
ಮಿಶ್ರ ಪ್ರತಿಕ್ರಿಯೆ ಎಂದರೆ ಹೇಗಿರುತ್ತೆ???
ನಿಮ್ಮ ಅತ್ತೆ ಏಳನೆ ಮಹಡಿಯಿಂದ ನಿಮ್ಮ ಮರ್ಸಿಡೆಸ್ ಬೆಂಜ್ ಕಾರಿನ ಮೇಲೆ ಧೊಪ್ಪನೆ ಬಿಳುವುದು!!!

****
ಸೇಲ್ಸ್‍ಮ್ಯಾನ್ : ಸಾ...... ನಿಮ್ಗೆ ಈ ಪೌಡರ್ ಬೇಕಾ....?
ರಾಂಪ : ಇದು ಯಾರಿಗೆ ?
ಸೇಲ್ಸ್‍ಮ್ಯಾನ್ : ಇಲಿಗಳಿಗೆ ಸಾರ್....!
ರಾಂಪ : ಬೇಡ..... ಬೇಡ.... ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್ಸ್‌ಟಿಕ್ ಕೇಳ್ಬಹುದು..!

****

ಹೆಂಡತಿ : 'ರ್ರೀ, ನಾನು ಅಕಸ್ಮಾತ್ ಸತ್ತು ಹೋದರೆ ನೀವು ಏನು ಮಾಡ್ತೀರಿ?'.
ಗಂಡ : 'ನೀನಿಲ್ಲದೆ ನಾ ಹೆಂಗೇ ಇರಲಿ. ನಾನು ನಿನ್ನ ಹಿಂದೆ ಬಂದು ಬಿಡ್ತೀನಿ'.
ಹೆಂಡತಿ : 'ನನ್ನ ಕಂಡರೆ ಅಷ್ಟು ಪ್ರೀತೀನೇ?'.
ಗಂಡ : 'ಹಂಗಲ್ವೇ. ನೀನಿದ್ರೆ, ನಿನ್ನ ಬಾಯಿಗೆ ಹೆದರಿ ಸಾಲಗಾರರು ಯಾರೂ ನನ್ನ ಹತ್ತಿರ ಬರಲ್ಲ. ನೀನೇ ಹೋದರೆ ನನ್ನ ಗತಿ ಏನು. ಅವರು ಸಾಯಿಸೋಕೆ ಮುಂಚೆ ನಾನೇ ಹೋಗಿಬಿಡೊದು ಒಳ್ಳೇದಲ್ವೇ?'

ಈಗ ಗಂಡನ ಸರದಿ.
ಗಂಡ : 'ಲೇ, ನಾನು ಅಕಸ್ಮಾತ್ ಸತ್ತು ಹೋದರೆ ನೀನು ಬೇರೆ ಮದುವೆ ಆಗ್ತೀಯಾ..?'
ಹೆಂಡತಿ : (ನಾಚುತ್ತಾ) 'ಥೂ ಹೋಗೀಪ್ಪ... ಆಸೆ ತೋರಿಸಬೇಡಿ.. ನನಗೆ ನಾಚಿಕೆ ಆಗುತ್ತೆ'

***
ಗಂಡ -ಹೆಂಡತಿಗೆ ಜಗಳ ಆಗಿತ್ತು.
ಹೆಂಡತಿ : 'ನೀವೇನೂ ದೊಡ್ಡ ಸಾಧನೆ ಮಾಡಿದ್ದೀನಿ ಅಂತ ಅಂದುಕೋಬೇಡಿ. ಪ್ರತಿ ಯಶಸ್ವಿ ಗಂಡಸಿನ ಹಿಂದೆ ಒಂದು ಹೆಣ್ಣು ಇರ್ತಾಳೆ '
ಗಂಡ : (ಥಣ್ಣಗೆ ಹೇಳಿದ) 'ಹೌದು ಕಣೆ, ವಿಕ್ರಮಾದಿತ್ಯನ ಹಿಂದೆ ಬೇತಾಳ ಇದ್ದ ಹಾಗೆ'.

*******
ವಿಚಿತ್ರ


ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:
'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'
'ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು?' ಹೆಂಡತಿ ಕೇಳಿದಳು.
'ಏರೋಪ್ಲೇನ್ ಕಣೇ'!

ಬ್ರ್ಯಾಂಡಿ

ಸ್ನೇಹಿತ : ಬ್ರ್ಯಾಂಡಿ ಕುಡಿದ್ರೆ ಕೆಮ್ಮು ಹೋಗುತ್ತಾ ?
ಗುಂಡ : ನನ್ನ ಹೊಲ, ಮನೆನೇ ಹೋಗಿರುವಾಗ ನಿನ್ನ ಕೆಮ್ಮು ಯಾಕೆ ಹೋಗಲ್ಲಾ !!!

***

ಸಂಗ್ರಹಣೆ : ಆನಂದ್ ರಾಜೇಅರಸ್