ಉತ್ತರ -ಬಲಿಷ್ಠ ಸವಾಲು...ಏಪ್ರಿಲ್ 2010

1. ನಾವೆಲ್ಲಾ ತಿಳಿದ ಹಾಗೆ ಸಪ್ತ ಸ್ವರಗಳು ಸೇರಿದರೆ ಸಂಗೀತ, ಸಪ್ತ ವರ್ಣಗಳು ಸೇರಿದರೆ ಶುಭ್ರ ಬಿಳಿ ಬಣ್ಣ, ಸಪ್ತ ದಿನಗಳು ಸೇರಿದರೆ ವಾರ ವಾಗುವ ಹಾಗೆ ಈ ಸಪ್ತ ಸನ್ಮಾನ್ಯರು ಸೇರಿದರೆ ಆತ್ಮಾಭಿಮಾನ ಮತ್ತು ಮನಸ್ಸಿಗೆ ಖುಷಿಯೋ ಖುಷಿ. ಹಾಗಾದರೆ  ಹೇಳಿ ಕೆಳಕಂಡ ಛಾಯಾಚಿತ್ರದಲ್ಲಿ ಇರುವವರು ಯಾರು ಯಾರೆಂದು ?


ಉತ್ತರ: ಕನ್ನಡ ಸಾಹಿತ್ಯದಲ್ಲಿ ಖ್ಯಾತನಾಮರಾದ ಮಾಸ್ತಿ  ವೆಂಕಟೇಶ್ ಅಯ್ಯಂಗಾರ್, ಡಿ. ವಿ ಗುಂಡಪ್ಪ , ಕುವೆಂಪು ,
 ವಿ. ಸೀತಾರಾಮಯ್ಯ, ಕೆ. ಶಿವರಾಂ ಕಾರಂತ್ , ಎ.ಎನ್ ಕೃಷ್ಣರಾವ್  ಮತ್ತು  ಜೆ.ಪಿ. ರಾಜರತ್ನಂ

2. ಏಷಿಯಾದಲ್ಲೇ ಮೊಟ್ಟ ಮೊದಲ ಜಲ ವಿದ್ಯುತ್ ಸ್ಥಾವರ ಕನ್ನಡ ನಾಡಿನಲ್ಲಿ ಎಲ್ಲಿ ಶುರುವಾಯಿತು(ಈಗಲೂ ಚಾಲ್ತಿಯಲ್ಲಿದೆ)?

ಉತ್ತರ: ಶಿವನಸಮುದ್ರ  ಹೈಡ್ರೋ  ಎಲೆಕ್ಟ್ರಿಕ್  ಪ್ರಾಜೆಕ್ಟ್. 
ಇದು 1900 ರ ಸುಮಾರು ಮೈಸೂರ್ ನ ದಿವಾನ್ ರಾಗಿದ್ದ  ಕೆ. ಶೇಷಾದ್ರಿ  ಅಯ್ಯರ್  ಅವರ ಕನಸಿನ ಕೂಸು. ಇವರ ಬಗ್ಗೆ ಹೆಚ್ಚಿನ ವಿವರಕ್ಕೆ http://en.wikipedia.org/wiki/K._Seshadri_Iyer

3. ಕೆಳಕಂಡ ಇಂಗ್ಲೀಷ್ ಪದಗಳಿಗೆ ಕನ್ನಡ ಪದಗಳು ಯಾವುದು? 
       a) translate  
      b) postman
      c) classified
      d) photosynthesis  
      e) advertisement

ಉತ್ತರ:

       a) ಅನುವಾದ


       b) ಅಂಚೆಪೇದೆ
      c) ವರ್ಗಿಕೃತ
      d) ದ್ಯುತಿಸಂಶ್ಲೇಷಣ  
      e) ಜಾಹಿರಾತು

ಸರಿಯಾದ ಉತ್ತರ ಕಳಿಸಿದವರು:

 ಆನಂದ್ ರಾಜೇಅರಸ್ - 
ಅಭಿನಂದನೆಗಳು!