ಈ ಮುನ್ನ ನಡೆದ ಕಾರ್ಯಕ್ರಮಗಳ ಬಗ್ಗೆ - ಭಾಗ 2 ..

                            ಈ ಮುನ್ನ ನಡೆದ ಕಾರ್ಯಕ್ರಮಗಳ ಬಗ್ಗೆ.. ಮುಂದುವರೆದ ಭಾಗ 2

ಅಕ್ಟೋಬರ್ 9 ರ ವನಭೋಜನ:
ಕಳೆದ ವರ್ಷದ ವನಭೋಜನದಂತೆಯೇ ಈ ವರ್ಷದ ವನ ಭೋಜನವೂ ಸಾಕಷ್ಟು ಆಟೋಟಗಳಿಂದ ಕೊಡಿತ್ತು. ಇದಕ್ಕಾಗಿ ಶ್ರಮಿಸಿದ ಜಯಂತ್ ಫಲಕ್ಷಯ್ಯ, ಅರುಣ ಗಾಡೇಕರ್, ರಾಜೇಶ್, ಹರಿಣಿ, ನಳಿನ ಬಾಗಲೋಡಿ, ಮಧು ಬಾಲಕೃಷ್ಣ ಮತ್ತು ಅನು ಭಟ್ ಅವರುಗಳಿಗೆ ಅನೇಕ ವಂದನೆಗಳು.
ನೀವು ಈ ವರ್ಷದ ವನಭೋಜನಕ್ಕೆ ಬಂದಿರಲಿಲ್ಲವಾದಲ್ಲಿ ಈ ಕೆಳಗಿನ ಛಾಯಾಚಿತ್ರಗಳನ್ನು ನೋಡಿ ತಿಳಿಯಿರಿ ಅಂದು ಅಲ್ಲಿದ್ದ ಸದಸ್ಯರೆಲ್ಲರೂ ಹೇಗೆ ಆಟವಾಡಿ ತಣಿದು ಕುಣಿದರೆಂದು!

ಏಯ್ ಸಂಭುಲಿಂಗ, ಏನ್ಲ ಇದು ಬಣ್ಣ ಬಣ್ಣದ್ದು ಚಡ್ಡಿ ಕಾಣ್ತಾವೇ? ಏನಾದ್ರೂ ಜಾತ್ರೆ ಐತೇನ್ಲಾ?
ಧಣೀ! ಹಂಗೆ ಕಣ್ತಾದೆ, ಅಮೆರಿಕದ ಹೈಕಳು ಏಸು ಚೆಂದಾಗಿ ಚಮಚದ್ ಮ್ಯಾಗೆ ನಿಂಬೆ ಮಡಿಕ್ಕೊಂಡು ಒಡ್ತಾವೆ
ಇದೇನ್ಲಾ! ಅಮೆರಿಕದಾಗೂ ಕುಸೊಗುಳ್ ಕಿರಿಕೆಟ್ ಆಡ್ತಾವಲ್ಲಪ್ಪೋ

ಬುದ್ಧಿ! ಬಿಸ್ಬಿಸಿ ಬಡಾಸ್ತಾವ್ರೆ ಹಂಗೇನೆ ವೊಸಿ ತಿನ್ಕೊಂಡ್ ಬರೋಮ?
ಸುಮ್ಕೆ ಬಾರ್ಲಾ, ಇಲ್  ಸಣ್ಣ ಸಣ್ಣ ಹೈಕಳು ಟೋಪಿ ಬೇಕಾ ಟೋಪಿ ಆಡತಾವಲ್ಲಪಪೋ?

ಧಣೀ! ಏನ್ ಹಸಿರು! ಹಂಗೆ ಸ್ವಲೋಪ ಮನಿಕೊಣವಾ?
ಏಯ್! ಯಾವೋನ್ಲಾ ಇವ. ಇಮ,ಇಮ ಅಂತಾ 
ಎಲ್ಲ್ರುವೆ ಬಡಕೊತಾವ್ರೆ. ಹಸಿರು ನೋಡದ್ರೆ ಹೆಂಗೈತದೆ ಹೇಳು?
ಸಂಭುಲಿಂಗ, ಯಾಕ್ಲೆ ಎಲ್ರುವೇ ಹಿಂಗ್ ಬಿಟ್ ಕಣ್ ಬಿಟ್ತ್ಕಂಡು ನೋಡ್ತಾವ್ರೆ ?
ಹ್ಹೀ..ಹ್ಹಿ ಬುದ್ಧೀ! ಇಲ್ಲಿ ದೊಡ್ದ್ರುವೇ ಟೋಪಿ ಆಟ ಅಡ್ತವ್ರೆ
ಮಜಾ ಬತ್ಲಾ! ಗಂಡ್ಸ್ರಿಗೆ  ಹೆಂಗಸ್ರು, ಹೆಂಗಸ್ರಿಗೆ ಗಂಡಸ್ರೂನು ಟೋಪಿ ಹಾಕೋದ್
ಧಣೀ! ಅಮೆರಿಕಾದಗೆ ಹಿಂಗೆನೇಯಾ ಪಿಜ್ಜಾ ತಿನ್ನಾದು?
ಹಿಗೊಳ್ಲ, ಹೈಕಳು ಹಂಗೆ ತಿಂತಾವೆ! ನಾವುನೋವೆ ಹಾಂಗ್ ತಿನ್ನಾಕೆ ಸುರು ಮಾಡ್ಕೊಬೇಕ್
ಬುಡ್ಡೆ! ಬುಡ್ಡೆ! ನಮ್ಮೂರ ಜಾತ್ರೆ ಗೇಪ್ತಿಗೆ ಬತ್ತೈತೆ












ಧಣೀ! ಏನ್ ಅಳ್ತಾ ಇದೀರಾ?
ಇಲ್ಲ ಕಣ್ಲಾ! ಹಂಗೆನೆಯಾ ನಮ್ಮೂರು, ನಮ್ಮ ಜಾತ್ರೆ ಗೇಪ್ತಿಗ್ ಬಂದ್ ಕಣ್ಣು ಮಂಜಾಯಿತು
ಹೂ..ನಡೀರಿ ಮನೆ ತವ ಕಾಯ್ತಾವ್ರೆ 
ನವೆಂಬರ್ 26 ರ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಸಮಾರಂಭ ಕನ್ನಡ ಕೂಟದಲ್ಲಿ:
ಈ ಬಾರಿಯ ರಾಜ್ಯೋತ್ಸವ ಮತ್ತು ದೀಪಾವಳಿಯ ಕಾರ್ಯಕ್ರಮವು ವಿಜ್ರಂಭಣೆಯಿಂದ ನಡೆಯಿತು ಎಂದರೆ ಅತಿಶಯೋಕ್ತಿಯಲ್ಲ. ಅಲ್ಲಿ ಬಂದಿದ್ದ ನೀವೆಲ್ಲರೂ ಕಾರ್ಯಕ್ರಮ ಮತ್ತು ಕಾರ್ಯಕ್ರಮದ ಆಯೋಜನೆಯನ್ನು ಮೆಚ್ಚಿದ್ದಿರಾ ಎಂದು ನಮ್ಮ ಅನಿಸಿಕೆ. 
ಎಂದಿನಂತೆ ನಿಮ್ಮಗಳ ಅನಿಸಿಕೆಯನ್ನು ಕನ್ನಡ ಕೂಟಕ್ಕೆ ಇಲ್ಲಿ ತಿಳಿಸಿ. 

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು,  ಸದಸ್ಯರು, ನಿರ್ದೇಶಕರು, ಆಯೋಜಕರು ಮತ್ತು ಕಾರ್ಯಕ್ರಮ  ನಡೆಸಿಕೊಟ್ಟ emcee ಗಳಿಗೆ ನಮ್ಮ ಅನಂತ ವಂದನೆಗಳು.


ಇದೇ ಸಂಧರ್ಭದಲ್ಲಿ ಈ ವರ್ಷದ 'ಶಂಕರಿ ನರಸಿಂಹಯ್ಯ ಮುತೇರಿ ಅನುಷ್ಟಾನ ವಿದ್ಯಾರ್ಥಿ ವೇತನ' ದ $4,000.00 ಅನ್ನು ಕುಮಾರಿ. ಕಾವ್ಯ ಮುದ್ದುಕುಮಾರ್  ಮತ್ತು ಕುಮಾರ. ಪ್ರಜ್ವಲ್ ಕಡೂರ್ ಹಂಚಿಕೊಂಡಿದ್ದಾರೆ.  ಅವರುಗಳು Drs.ಅನ್ನಪೂರ್ಣ ಮತ್ತು ಸುಬ್ರಹ್ಮಣ್ಯ ಭಟ್ ದಂಪತಿಗಳು ಹಾಗು ಶ್ರೀಮತಿ ಅನ್ನಪೂರ್ಣ ಭಟ್ ರ ತಾಯಿ ಅವರ ಅಮೃತ ಹಸ್ತದಿಂದ ವಿದ್ಯಾರ್ಥಿ ವೇತನ ಪಡೆದರು. ಬನ್ನಿರಿ ನಾವೆಲ್ಲರೂ ಸೇರಿ ಅಕ್ಷತಳನ್ನು ಅಭಿನಂದಿಸಿ ಆಶೀರ್ವದಿಸುವ.

ಇದೇ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಈ ಕೆಳಗಿವೆ.




















ಛಾಯಾಗ್ರಹಣ ಸಹಾಯ: 
ಮುರಳಿ ಗೋಕರೆ, ಸತೀಶ್ ಶಿವರುದ್ರಪ್ಪ, ಶ್ರೀಧರ್ ಭಟ್, ಮಂಗಳಾ ಉಡುಪ, ಸೀಮಾ ಮುರಳಿ ಮತ್ತು ದೀಪ್ತಿ ನಾಗೇಶ್

ಈ ಕೆಳಗೆ ಅಂದಿನ ಕಾರ್ಯಕ್ರಮಗಳ  ಕೆಲವೊಂದು youtube ಲಿಂಕ್ ಗಳನ್ನು ಇಲ್ಲಿ ಕೊಟ್ಟಿದ್ದೇವೆ ನೋಡಿ ಆನಂದಿಸಿ.

ನಮ್ಮ ಕಾರ್ಯಕ್ರಮಗಳ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳ ಲಿಂಕ್ (ಕೊಂಡಿ) ಗಳನ್ನು ಈ ಕೆಳಗೆ ಕೊಡಲಾಗಿದೆ.


1. http://www.nripulse.com/CityNews/Prabhat_Kalavidaru.html
2. http://nripulse.com/PrintJune10/NRIPulse_Pg6.pdf


ನಮ್ಮ ಕೂಟದ ಎಲ್ಲಾ ಕಾರ್ಯಕ್ರಮಗಳ ವಿವರವಾದ ವರದಿಯನ್ನು ತಪ್ಪದೆ ಪ್ರಕಟಿಸುವ ಜೋತ್ಸ್ನ ಹೆಗೆಡೆ ಅವರಿಗೆ ಅನೇಕ ವಂದನೆಗಳು.

ಈ ಕಾರ್ಯಕ್ರಮದ ಸುಂದರ ಛಾಯಾಚಿತ್ರಗಳನ್ನು ಈ ಸಂಚಿಕೆಯ ಮುಖ್ಯ ಪುಟದಲ್ಲಿ ಸ್ಲೈಡ್ ಶೋ ಮಾದರಿಯಲ್ಲಿ ಲಗತ್ತಿಸಲಾಗಿದೆ. ದಯಮಾಡಿ ಅಲ್ಲಿಗೆ ಹೋಗಿ ಆ ಸ್ಲೈಡ್ ಶೋ ವನ್ನು ಕ್ಲಿಕ್ ಮಾಡಿ ಆನಂದಿಸಬೇಕು ಎಂದು ವಿನಂತಿಸುತ್ತೇವೆ.