ಶನಿವಾರ, ಜನವರಿ 22, 2011

ಸಂಪಾದಕೀಯ ..

ಮಾನ್ಯ ಮಿತ್ರರೇ,
2011 ಹೊಸ ವರ್ಷದ ಹಾಗು ಮಕರ ಸಂಕ್ರಾಂತಿಯ  ಶುಭಾಶಯಗಳು! 
ಬಹು ದಿನಗಳ ನಂತರ ಇ-ನ್ಯೂಸ್ ಸಂಚಿಕೆ ನಿಮ್ಮನ್ನು ತಲುಪಿದೆ. ಇದು ತಡವಾದದಕ್ಕೆ ಕ್ಷಮೆ ಇರಲಿ. 


ನಿಮ್ಮ ಈ ಇ-ನ್ಯೂಸ್ ಸಂಚಿಕೆಯು ಪೂರ್ಣ ರೂಪದಲ್ಲಿ ಬದಲಾವಣೆಯನ್ನು ಹೊಂದಿದೆ. ಈ ಬದಲಾವಣೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸಿದ್ದೇವೆ. ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತ.

ನಿಮ್ಮ ಇ-ನ್ಯೂಸ್ ಸಂಚಿಕೆಯು ಇನ್ನು ಮುಂದೆ ಹಲವಾರು ಪುಟಗಳಲ್ಲಿ ಪ್ರಕಟವಾಗುತ್ತದೆ. ಇದು ಹಿಂದಿನ ಸಂಚಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಒಂದೇ ಪುಟದಲ್ಲಿನ  ಉದ್ದವಾದ ವರದಿಗಳನ್ನು ಈ ಹೊಸ ವಿನ್ಯಾಸ ಬದಲಾಯಿಸುತ್ತದೆ.
ಈ ಸಂಚಿಕೆಯು ಪ್ರತಿ ವಿಭಾಗದ ವರದಿಗಳನ್ನು ಬೇರೆ ಬೇರೆಯಾಗಿ ಪ್ರತಿ ಪುಟಗಳಲ್ಲಿ ವರದಿ ಮಾಡುತ್ತದೆ. ಇದೀಷ್ಟು ಹೊಸ ವಿನ್ಯಾಸದ ಬಗ್ಗೆ.

ಇನ್ನು ಮುಖ್ಯ ವಿಷಯಕ್ಕೆ ಬರೋಣ, ಹೊಸ ವರ್ಷ ಶುರುವಾಗಿದೆ ಅದರೊಂದಿಗೆ ಈ ವರ್ಷದ ಎಲ್ಲಾ ಕಾರ್ಯಕ್ರಮಗಳ ಸಿದ್ಧತೆಗಳು ನಡೆಯಬೇಕು ಅದರೊಂದಿಗೆ ನಮ್ಮ ಈ ವರುಷದ ಸದಸ್ಯತ್ವ ನವೀಕರಣೆಯೂ ಆದ್ಯವಾದದ್ದು. ಅದ್ದರಿಂದ ನಮ್ಮೆಲ್ಲಾ ಕನ್ನಡ ಹಿತೈಷಿಗಳಲ್ಲಿ ನಮ್ಮ ಮನವಿಯೇನೆಂದರೇ ತಾವೆಲ್ಲಾ ಈ ವರ್ಷದ ಸದಸ್ಯತ್ವವನ್ನು ಆದಷ್ಟು ಬೇಗ ನವೀಕರಿಸ ಬೇಕೆಂಬುದು.  ಇದಕ್ಕೆ ಬೇಕಾದ ಸದಸ್ಯತ್ವದ ಅರ್ಜಿಯು ಇಲ್ಲಿ ದೊರೆಯುತ್ತದೆ. ಸದಸ್ಯರ ವಿಷಯ ತುಂಬಿದ ಅರ್ಜಿಯನ್ನು ನೀವು ಕನ್ನಡ ಕೂಟದ ಇ-ಮೇಲ್ ನ ಮೂಲಕ ಕೂಡ ಕಳುಹಿಸಬಹುದು.
 ಇದರ ಜೊತೆಯಲ್ಲಿಯೇ ನಮ್ಮ ಕೂಟದ ವತಿಯಿಂದ ನಾವೆಲ್ಲಾ ಸಂಕ್ರಾಂತಿಯನ್ನು ಸಂಭ್ರಮದೊಂದಿಗೆ ಆಚರಿಸಬೇಕು. ಇದು ಯಾವಾಗಲೂ ಫೆಬ್ರವರಿಯ ಎರಡನೇ ಅಥವಾ ಮೂರನೇ ವಾರದ ಶನಿವಾರ ಆಚರಿಸುವಂತದ್ದು . ಆದರೆ ಈ ಬಾರಿ ಹಿಮಪಾತ ಮತ್ತು ಸಮಯದ ಅಭಾವದಿಂದ ಮಾರ್ಚಿ 26,2011 ಕ್ಕೆ ಮುಂದೂಡಿದೆ. ಇದಕ್ಕೆ ಎಂದಿನಂತೆ ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾದದ್ದು. ತಾವೆಲ್ಲರೂ ಇದನ್ನು ಮನಗಂಡು ಕಾರ್ಯಕ್ರಮ ಆಯೋಜಿಸುವದಕ್ಕೂ ಇಲ್ಲವೇ ನಿಮ್ಮ ನಿಮ್ಮ ಕಾರ್ಯಕ್ರಮಗಳ ಸಿದ್ದತೆ/ಅದರ ನಿರ್ದೇಶನಕ್ಕೋ ಸಿದ್ದತೆ ಮಾಡಿಕೊಳ್ಳಬೇಕೆಂದು ಸವಿನಯ ಪ್ರಾರ್ಥನೆ. ಎಲ್ಲಾ ಕಾರ್ಯಕ್ರಮಗಳ ನಿರ್ದೇಶಕರುಗಳು ಆದಷ್ಟು ಬೇಗನೆ ತಮ್ಮ ಕಾರ್ಯಕ್ರಮಗಳ ಪಟ್ಟಿಯನ್ನು ಕನ್ನಡ ಕೂಟಕ್ಕೆ ತಿಳಿಸಬೇಕೆಂದು ವಿನಂತಿ. ಇದಕ್ಕಾಗಿ ಕಡೆಯ ದಿನ ಫೆಬ್ರವರಿ 15 ರಂದು ತಡ ನಂತರ ಬಂದ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಕನ್ನಡ ಕೂಟದ ಇ-ಮೇಲ್ ನ ಮೂಲಕ ಸಹಕರಿಸಿ.

ಇನ್ನೊಂದು ಮುಖ್ಯ ವಿಷಯವೆಂದರೆ, ನಿಮ್ಮಲ್ಲಿ ಯಾರಿಗಾದರೂ ಈ ವರ್ಷದ ಕಾರ್ಯಕಾರಿಣಿ ಸಮಿತಿಯಲ್ಲಿ ಕೆಲಸ ಮಾಡಬೇಕೆಂದು ಇಚ್ಛೆ ಇದ್ದಲ್ಲಿ ನಿಮ್ಮ nomination ಅರ್ಜಿಯನ್ನು ಜೆನವರಿ 31 ರ ಒಳಗೆ ಕನ್ನಡ ಕೂಟಕ್ಕೆ ಕಳುಹಿಸಬೇಕೆಂದು ವಿನಂತಿ.

ಸೂಚನೆ: ನೀವು ಬೇರೆ ಪುಟಕ್ಕೆ ಅಥವಾ ಮುಂದಿನ ಪುಟಕ್ಕೆ ಹೋಗಬೇಕಾದಲ್ಲಿ, ಮೇಲೆ ನಿಮ್ಮ ಎಡದಲ್ಲಿರುವ ಲಿಂಕ್ ಗಳನ್ನು ಕ್ಲಿಕ್ಕಿಸಿ